Chiranth Prakashana Online Book Store

Chiranth Prakashana

Our Mission

"Illuminating the lamp of knowledge through books"

Our Vision

"The revolution of thought through the book"

ಆರಂಭ 2021. ಐತಿಹಾಸಿಕ, ವೈಚಾರಿಕ, ವೈಜ್ಞಾನಿಕ ಹಾಗು ಸಾಂಸ್ಕೃತಿಕ ಪರಂಪರೆ ಪ್ರತಿನಿಧಿಸುವ ಸದಭಿರುಚಿಯ ಪುಸ್ತಕಗಳ ಪ್ರಕಟಣೆ ಚಿರಂತ್ ಪ್ರಕಾಶನದ ಉದ್ದೇಶ. ಸಮಂಜಸವಾದ ಬೆಲೆ, ಉತ್ತಮ ವಿನ್ಯಾಸ, ಗುಣಮಟ್ಟದ ಕಾಗದ ಬಳಕೆ, ಅಚ್ಚುಕಟ್ಟಾದ ಮುದ್ರಣ ಇವು ಚಿರಂತ್ ಪ್ರಕಾಶನದ ವಿಶೇಷತೆಗಳು.

Beginning 2021. The goal of our Chiranth Prakashana is to publish the best books that represent historical, scientific, rational and cultural heritage. the reasonable price, good design, quality paper use, and tidy printing.

Parameshwara. H
Founder

ಪರಮೇಶ್ವರ ಎಚ್. ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹಸಿರು ಕಾನನದ ಸಣ್ಣಹಳ್ಳಿಯೊಂದರ ಕಡುಬಡತನದ ಕುಟುಂಬದಿಂದ ಬಂದವರು. ಹೊನ್ನನಾಯ್ಕ ಮತ್ತು ದೇವಮ್ಮ ರೈತದಂಪತಿಯ ನಾಲ್ವರು ಮಕ್ಕಳಲ್ಲಿ ಹಿರಿಯವನಾಗಿ ಜನಿಸಿದರು. ಅಪ್ಪ-ಅಮ್ಮ ಇಬ್ಬರೂ ಓದಿನಿಂದ ಅನಕ್ಷರಸ್ಥ ಸಮಾಜದಿಂದ ಬಂದವರಾಗಿದ್ದರೂ ಮಗನ ವಿದ್ಯಾಭ್ಯಾಸಕ್ಕಾಗಿ ಹೊಟ್ಟೆ-ಬಟ್ಟೆ ಕಟ್ಟಿ ದುಡಿದು ಓದಿಸಿದ್ದರ ಪರಿಣಾಮ ಶಾಲೆ-ಕಾಲೇಜುಗಳ ಮೆಟ್ಟಿಲು ಹತ್ತುವಂತಾಯಿತು. ಬಾಲ್ಯದ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿಯೇ ಪಡೆದರು. ಪ್ರೌಢ, ಸ್ನಾತಕ ಮತ್ತು ಸ್ನಾತಕೋತ್ತರ ಕಲಿಕೆ-ಗಳಿಕೆ ಅಧ್ಯಯನವನ್ನು ಹೊಸನಗರ ಮತ್ತು ಮೈಸೂರಿನಲ್ಲಿ ಪಡೆದರು. ವ್ಯಾಸಂಗ ಮುಗಿದ ಮೇಲೆ ಜೀವನ ನಿರ್ವಹಣೆಗಾಗಿ ಬೆಂಗಳೂರು ಸೇರಿಕೊಂಡರು. ಶಿಕ್ಷಣ ಕ್ಷೇತ್ರವನ್ನು ಬದುಕಿನ ವೃತ್ತಿಯನ್ನಾಗಿ ಆರಿಸಿಕೊಂಡು ಅಧ್ಯಾಪಕರಾಗಿ ದುಡಿದರು. ವಿಶೇಷವಾಗಿ ಪುಸ್ತಕ ಪ್ರಪಂಚದ ಬಗ್ಗೆ ಹೊಸಗೀಳು ಮೈಗೂಡಿಸಿಕೊಂಡ್ಡಿದ್ದು, ವೈಚಾರಿಕ-ವೈಜ್ಞಾನಿಕ-ಐತಿಹಾಸಿಕ-ಸಾಮಾಜಿಕ-ಸಾಂಸ್ಕೃತಿಕ ಚಿಂತನೆಗಳನ್ನು ಅಭಿವ್ಯಕ್ತಿಸುತ್ತಾ ಕೃತಿಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು.

ಸಹೃದಯ ಸಾಹಿತ್ಯಾಸಕ್ತರಿಗೆ ಹೊಸ ಓದು – ಹೊಸ ನೋಟದತ್ತ ಚಿತ್ತ ಹರಸಿ ಪುಸ್ತಕಗಳ ಮೂಲಕ ಜ್ಞಾನದೀಪವನ್ನು ಬೆಳಗಿಸುವ ಕಾಯಕದಲ್ಲಿ ತೊಡಗಿರುವರು. ವಿಶೇಷವಾಗಿ ವಿದ್ಯಾರ್ಥಿಗಳು, ಪೋಷಕರು, ಪರೀಕ್ಷಾರ್ಥಿಗಳು, ಸಹೃದಯ ಸಾಹಿತ್ಯಾಸಕ್ತರು, ಜನಮಾನಸರನ್ನು ಒಳಗೊಂಡಂತೆ ಎಲ್ಲರನ್ನೂ ಮನದಲ್ಲಿಟ್ಟುಕೊಂಡು ಸದಭಿರುಚಿಯ ಹೊತ್ತಗೆಗಳನ್ನು ಚಿರಂತ್ ಪ್ರಕಾಶನದ ಮೂಲಕ ತಲಪಿಸುವ ಕಾಯಕದಲ್ಲಿ ಮಗ್ನರಾಗಿರುವರು.

ಕನ್ನಡಿಗರೆಲ್ಲರ ಕೃಪೆ-ಹಾರೈಕೆ-ಆಶೀರ್ವಾದ-ಸಹಕಾರ-ಪ್ರೀತಿ-ಅಭಿಮಾನ ಯಾವತ್ತಿಗೂ ಹೀಗೆ ಮುಂದುವರಿಯಲಿ, ಪುಸ್ತಕಗಳನ್ನು ಕೊಂಡು ಓದುವ ಸಾಹಿತ್ಯಾಭಿರುಚಿ ನಮ್ಮ-ನಿಮ್ಮೆಲ್ಲರ ಚಿರಂತ್ ಪ್ರಕಾಶನದ ಮೇಲೆ ಸದಾಕಾಲವಿರಲೆಂದು ಆಶಿಸುತ್ತೇವೆ. ನಿಮ್ಮೆಲ್ಲರ ಅನಿಸಿಕೆ-ಅಭಿಪ್ರಾಯಗಳಿಗೆ ಚಿರಂತ್ ಪ್ರಕಾಶನದ ಬಾಗಿಲು ಸದಾ ತೆರೆದಿರುತ್ತದೆ.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208