Chiranth Prakashana Online Book Store

KANNADA

ಪುಸ್ತಕಂ ಹಸ್ತಭೂಷಣಂ

”ಪುಸ್ತಕಂ ಹಸ್ತಭೂಷಣಂ”

ಮ್ಮ ಪೂರ್ವಜರು ತಮ್ಮ ಅನುಭವದ ಚಿಂತನಾ ನುಡಿಯಾಗಿ ‘ಪುಸ್ತಕಂ ಹಸ್ತಭೂಷಣಂ’ ಎಂದಿರುವರು. ರೋಮನ್ ಬರೆಹಗಾರ ಸಿಸಿರೋ ‘‘ಪುಸ್ತಕವಿಲ್ಲದ ಕೊಠಡಿ ಪ್ರಾಣವಿಲ್ಲದ ದೇಹದಂತೆ’’ ಎಂದಿರುವುದು ಸಾರ್ವಕಾಲಿಕ ನುಡಿಮಿಂಚಾಗಿದೆ. ಓದಲು ಬಾರದ ವ್ಯಕ್ತಿಯನ್ನು ಹೊರತುಪಡಿಸಿದರೆ ಎಲ್ಲಾ ಸನ್ನಿವೇಶ-ಸಮಯ-ಸಂದರ್ಭಗಳಲ್ಲಿಯೂ ನಮಗಿರಬಹುದಾದ ಏಕಮಾತ್ರ ಸಂಗಾತಿ ಪುಸ್ತಕ. ಜಗತ್ತಿಗೇ ಬೆಳಕು ನೀಡುವ ಸೂರ್ಯನನ್ನು ಉದ್ದೇಶಿಸಿ ನಾವೆಲ್ಲರೂ ‘ಧಿಯೋಯೋನ ಪ್ರಚೋದಯಾತ್’ ಎಂದು ಗಾಯತ್ರಿ ಮಂತ್ರವನ್ನು ಪಠಿಸುತ್ತೇವೆ. ಸೂರ್ಯನಂತೆ ನಮ್ಮ ಧೀಶಕ್ತಿಯನ್ನು ಪ್ರಚೋಧಿಸುವ ಮತ್ತೊಂದು ಸಾಧನವೇನಾದರೂ ಇದ್ದರೆ ಅದು ಪುಸ್ತಕ.

ಜ್ಞಾನ ಗಳಿಕೆಗೆ ಪುಸ್ತಕಕ್ಕಿಂತ ಸಮಾನವಾದ ಮಾಧ್ಯಮ ಬೇರೊಂದಿಲ್ಲ ಎನ್ನಬಹುದು. ದೂರದರ್ಶನವನ್ನೊಗೊಂಡಂತೆ ಮತ್ತಾವುದೇ ಶಕ್ತಿಶಾಲಿ ಮಾಧ್ಯಮದಲ್ಲೂ ಪುಸ್ತಕದಲ್ಲಿರುವಂತೆ ಪ್ರೇಕ್ಷಕನ ಪ್ರಯೋಗಶೀಲತಗೆ ಅವಕಾಶವಿಲ್ಲ. ಎರಡನೆಯದಾಗಿ, ಮನಸನ್ನು ಏಕಾಗ್ರಗೊಳಿಸಿ ಗ್ರಹಿಸಲು ಪುಸ್ತಕದಂತೆ ಅನ್ಯ ಸಾಧನವಿಲ್ಲ. ನಮಗೆಲ್ಲ ವಿಸ್ತೃತ ಗ್ರಹಣ ಶಕ್ತಿಯನ್ನು ನೀಡುವ ಪ್ರಭಾವಿ ಮಾಧ್ಯಮವೂ ಹೌದು.

ಪ್ರಾಚೀನದಲ್ಲಿ ಕೈಬರೆಹದ ಹಸ್ತಪ್ರತಿಗಳು ಸರಿಸುಮಾರು 2000 ವರ್ಷಗಳಿಂದ ರೂಢಿಯಲ್ಲಿದ್ದವು. ‘ಲಿಪಿಕಾರ’ ಎಂಬ ವೃತ್ತಿಯವರು ಇದ್ದರು. ಕಾಗದಕ್ಕೂ ಮುಂಚೆಯೇ ಬಟ್ಟೆ (ಕಡತ) ‘ಭೂರ್ಜ್ವ ಪತ್ರ’ ಎಂಬ ಮರದ ತೊಗಟೆ, ಓಲೆಗರಿಗಳ ಮೇಲೂ ಪ್ರತಿಗಳನ್ನು ಮಾಡಿ ಹಸ್ತಭೂಷಣವಾಗ¨ಲ್ಲ ಗ್ರಂಥಗಳನ್ನು ರಚಿಸಿದ್ದರು. ಮುದ್ರಣ ಕಲೆ ಬೆಳೆದ ಮೇಲೆ ಕ್ರಾಂತಿಯೇ ಆಯಿತು. ಜೈನರಲ್ಲಿ ‘ಶಾಶ್ತ್ರದಾನ‘ ಎಂಬ ಪುಣ್ಯಕಾರ್ಯದಂತೆ 10ನೇ ಶತಮಾನದಲ್ಲಿ ಬಾಳಿಬದುಕಿದ್ದ ಅತ್ತಿಮಬ್ಬೆ ತನ್ನ ತಂದೆ ಪೊನ್ನನಿಂದ ಹೇಳಿಸಿದ 1000 ಪ್ರತಿಗಳನ್ನು ಓಲೆಗರಿಯಲ್ಲಿ ಮಾಡಿಸಿ ಹಂಚಿದ ವಿವರಗಳಿವೆ.

ನಮ್ಮ ಪೂರ್ವಿಕರು ಪುಸ್ತಕಕ್ಕೆ ನೀಡಿದ ಮಹತ್ವ ಗಣನೀಯವಾದುದು. ಅದಕ್ಕೆ ಉದಾಹರಣೆಯಾಗಿ :

ಭಗ್ನಪುಷ್ಠ ಕಟಿಗ್ರೀವ

ಸ್ತಬ್ದ ದ್ರುಷ್ಠಿರ ಧೋಮುಖ

ಕಷ್ಠೇನ ಲಿಖಿತಂ ಗ್ರಂಥ

ಯತ್ನೇನ ಪರಿಪಾಲಯೇತ್

ಒಂದೇ ಸಮನೆ ಬೆನ್ನು, ಸೊಂಟ, ಕತ್ತುಗಳನ್ನು ಬಗ್ಗಿಸಿ ಅಧೋವದನನಾಗಿ ಒಂದೇ ಕಡೆ ಕಣ್ಣಲ್ಲಿ ಕಣ್ಣಿಟ್ಟು ಬಲು ಕಷ್ಟಪಟ್ಟು ಈ ಪುಸ್ತಕವನ್ನು ಬರೆಯಲಾಗಿದೆ. ಇದನ್ನು ವಿಶೇಷ ಪ್ರಯತ್ನ ಮತ್ತು ಪ್ರೀತಿಯಿಂದ ರಕ್ಷಿಸಿ ಎಂಬುದು ಇದರರ್ಥ. ಹಾಗಾದರೆ ಇದರ ರಕ಼ಣೆ ಹೇಗೆ?

ತೈಲಾದ್ ರಕ್ಷೇತ್ ಜಲಾದ್ ರಕ್ಷೇತ್

ರಕ್ಷೇತ್ ಶಿಥಿಲ ಬಂಧನಾಥ್

ಮೂರ್ಖ ಹಸ್ತೆ ನಧಾತಜ್ಯಂ

ಏವಂ ದವತಿ ಪುಸ್ತಕಂ

ಈ ರೀತಿ ವಿನಂತಿಸುವುದು ಪುಸ್ತಕವೇ? ಎಣ್ಣೆ ಬೀಳದಂತೆ, ನೀರು ತಾಕದಂತೆ, ಅಡ್ಡಾದಿಡ್ಡಿ ಬಂಧನ (ಕಟ್ಟು) ಮಾಡಿಡದೆ, ಮೂರ್ಖನ ಕೈಗೆ ಕೊಡದೆ ಕಾಪಾಡಿ ಎನ್ನುವುದಾಗಿದೆ. ಇದನ್ನು ಓದಿದ ಯಾವ ಪುಸ್ತಕ ಅಭಿಮಾನಿ ಅಥವಾ ಪ್ರೇಮಿಗಾದರೂ ಮನ ಕರಗದೆ ಇರಲಾದೀತೆ?

”ಪುಸ್ತಕ ಓದಿ, ಜ್ಞಾನ ಸಂಪಾದಿಸಿ

4 thoughts on “KANNADA”

Leave a Comment

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208