Chiranth Prakashana Online Book Store

Sale!

ಆ 117 ದಿನಗಳು / Aa 117 Dinagalu (ಮರೈಸ್ ಮರಲಿನ್ ದಂಪತಿಗಳ ಕಡಲ ದುರಂತದ ನಿಜಕಥೆ)

225.00

Name of the Author – ಗಿರೀಶ್ ತಾಳಿಕಟ್ಟೆ
Publisher – ಕಾವ್ಯಕಲಾ ಪ್ರಕಾಶನ
Year of Publishing – 2022
Printing Number  – 1
Cover Page – ಸಾದಾ
Pages – 256
Book Size – 1/8 Demy Size
ISBN –

(For purchase of Rs 299/-and above)

About the Book

ಆ 117 ದಿನಗಳು
ಸಾಹಸಿಗಳಾದ ಮುರಲಿನ್ ಮತ್ತು ಮಲೈಸ್, ಟೈಲಿ, ಸತಿಪತಿಗಳು ಒಂದಾ ಇಂಗ್ಲೆಂಡಿನಿಂದ ಚಿಕ್ಕದೊಂದು ನಾವೆಯಲ್ಲಿ ಹೊರಟು, ಅಟ್ಲಾಂಟಿಕ್ ಮತ್ತು ಟಿಫಿಕ್ ಸಮುದ್ರಗಳನ್ನು ಹಾಯುತ್ತ, ನಡುವೆ ನಾವೆ ದುರಂತಕ್ಕೊಳಗಾಗಿ, ಜೀವನರಗದ ಗಳಿಗೆಗಳನ್ನು ಎದುರಿಸುತ್ತ ಬದುಕಿ ಬಂದ ರೋಚಕ ಕಥೆಯಿದು. ದಂಪತಿಗಳು ಪಯಣ ಆರಂಭಿಸಿದ ಮತ್ತು ತಲುಪಿದ ಬಂದುಗಳ ನಡುವಿನ ಕಡಲಿನ ನರವನ್ನು ಭೂಪಟದಲ್ಲಿ ನೋಡಿದರೆ ನಿಜಕ್ಕೂ ದಂಗುಬಡಿಯುತ್ತದೆ. ಈ ಕಥೆಯಲ್ಲಿರುವ ದಂಪತಿಗಳ ಪಯಣದ ಪೂರ್ವದ, ಪಯಣದ ಹಾಗೂ ಹಯತ್ತರದ ಬಾಳಿನ ಪ್ರೇಮ ಸಾಹಸ ಆನಂದ ದುಃಖ ಆಗಲಿಕೆಗಳು, ಸಮುದ್ರದ ಅಲೆಗಳಂತೆ ಒಂದಾದ ಮೇಲೊಂದು ಬಂದು ಓದುಗರನ್ನು ಅಪ್ಪಳಿಸುತ್ತದೆ. ಈ ಕೃತಿಯನ್ನು ಓದುವಾಗ ತೇಜಸ್ವಿಯವರ `ಮಹಾಪಲಾಯನ` ಕೃತಿ ನೆನಪಾಗುತ್ತದೆ.

ಮರಲಿನ್ ಮತ್ತು ಮರೈಸ್ ಜೋಡಿ ಮಾಡುವ ಯಾನವನ್ನು ಓದುವ ಕನ್ನಡಿಗರಿಗೆ, ಕ್ರಾಸ್ ನ ಸುರೇಶ್-ಗೌರಿಯರು ನೆನಪಾದರೆ ಆಶ್ಚರ್ಯವಿಲ್ಲ. ತೇಜಸ್ವಿಯವರ ಕಥನಗಳಲ್ಲಿ ಪ್ರೇಮಿಗಳು ಮಾಡುವ ಸಾಹಸಗಳಲ್ಲಿ ಸಾಮಾನ್ಯವಾಗಿ ಗಂಡು ಹೆಚ್ಚು ಕ್ರಿಯಾಶೀಲ ಮತ್ತು ಧೈರ್ಯಶಾಲಿ, ಆದರೆ ಈ ಪ್ರವಾಸ ಕಥನದಲ್ಲಿ ಬಾಳಕಡಲಿನೊಳಗೆ ಹುಟ್ಟನ್ನು ಗಂಡು ಕೈಬಿಟ್ಟಾಗಲೆಲ್ಲ ಅದನ್ನು ಎತ್ತಿಕೊಂಡು ಮಹಿಳೆ ದಿಟ್ಟತನ ಪ್ರದರ್ಶಿಸುತ್ತಾಳೆ. ಹೀಗಾಗಿ ಈ ಕೃತಿಯು, ನಿಸರ್ಗವು ಸ್ತ್ರೀಯೊಳಗಿನ ಅಪಾರ ಚೈತನ್ಯ ಧೈರ್ಯ: ತಾಯ್ತನಗಳನ್ನು ಲೋಕಕ್ಕೆ ಕಾಣಿಸಲೆಂದೇ ಸೃಷ್ಟಿಸಿದ ನಿಗೂಢ ಪ್ರಾಕೃತಿಕ ನಾಟಕದಂತಿದೆ.

ಲವಲವಿಕೆಯ ಗದ್ಯ ಲೇಖಕರಾದ ಗಿರೀಶ್ ತಾಳಿಕಟ್ಟೆ, ಈ ಅಪರೂಪದ ಕೃತಿಯನ್ನು ಸೊಗಸಾಗಿ ಅನುವಾದಿಸಿದ್ದಾರೆ. ಮತೀಯತೆ, ಜಾತೀಯತೆಯಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿರುವ ಭಾರತದ ಹೊಸತಲೆಮಾರಿನ ಹುಡುಗ ಹುಡುಗಿಯರು ಇಂತಹ ಕಥನಗಳನ್ನು ಓದಬೇಕು. ಈ ಪುಸ್ತಕ ಪ್ರಕಟವಾಗುವ ಕಾಲಕ್ಕೆ ತೇಜಸ್ವಿ ಇದ್ದಿದ್ದರೆ ಖಂಡಿತ ಇಷ್ಟಪಡುತ್ತಿದ್ದರು ಎಂದು ಅನಿಸುತ್ತದೆ.

  • ರಹಮತ್ ತರೀಕೆರೆ

Reviews

There are no reviews yet.

Be the first to review “ಆ 117 ದಿನಗಳು / Aa 117 Dinagalu (ಮರೈಸ್ ಮರಲಿನ್ ದಂಪತಿಗಳ ಕಡಲ ದುರಂತದ ನಿಜಕಥೆ)”

Your email address will not be published.

Related Books

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208