Chiranth Prakashana Online Book Store

Sale!

ಕನ್ನಡ ಕೈಫಿಯತ್ತುಗಳು | Kannada Kaifiyattuagalu

(1 customer review)

108.00

BOOK SPECIFICATIONS

Name of the Author – ಪುರುಷೋತ್ತಮ ಬಿಳಿಮಲೆ
Publisher – ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ
Year of Publishing – 
Printing Number  – 1
Cover Page – ಸಾದಾ
Pages – 124
Book Size – ⅛ Demy Size
ISBN –

Out of stock

Out of stock

Category:

(For purchase of Rs 299/-and above)

ABOUT THE BOOK 

ಟಿಪ್ಪುವಿನ ಪತನದ ಆನಂತರ ( ೧೭೯೯) ಕರ್ನಾಟಕದ ಇತಿಹಾಸ ಬದಲಾಯಿತು. ವಸಾಹತು ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಲ್ಲಿ ಆಧುನಿಕತೆಯು ವೇಗವಾಗಿ ಪ್ರವೇಶಿಸುವುದರೊಂದಿಗೆ ಆಧುನಿಕ ಇತಿಹಾಸ ರಚನೆಯ ಕೆಲಸಗಳೂ ಆರಂಭಗೊಂಡವು. ಈಸ್ಟ್ ಇಂಡಿಯಾ ಕಂಪೆನಿಯು ತನ್ನ ಲಾಭವನ್ನು ಹೆಚ್ಚಿಸಿಕೊಳ್ಳಲು ಅನುಕೂಲಕರವಾದಂಥ ದಾಖಲೆಗಳನ್ನು ತಾನೇ ಸೃಷ್ಟಿಸಿಕೊಂಡಿತು. ಇದಕ್ಕೆ ಪೂರಕವಾಗಿ ೧೭೬೨ರಲ್ಲಿ ಭಾರತಕ್ಕೆ ಬಂದ ಬುಕ್ನನ್, ೧೭೮೩ರಲ್ಲಿ ಕರ್ನಾಟಕ ಪ್ರವೇಶಿಸಿದ ಲೆ.ಕ. ಮೆಕೆಂಜಿ, ಟಿಪ್ಪೂವಿನ ಕುರಿತಾದ ಲಾವಣಿಯೊಂದನ್ನು ೧೮೦೩ರಲ್ಲಿ ಸಂಗ್ರಹಿಸಿದ ಜಾನ್ ಲೇಡನ್ ಮೊದಲಾದವರ ಕೆಲಸಗಳನ್ನು ಬಳಸಿಕೊಳ್ಳಲಾಯಿತು. ಈ ಹಂತದಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ವಿದೇಶೀ ವಿದ್ವಾಂಸರಿಗೆ ಸಹಾಯ ಮಾಡಲು ಅವರಿಗಿದ್ದ ಸಂಶೋಧನಾ ಸಹಾಯಕರು ಯಾರು ಎಂಬುದು. ಇವರು ತಕ್ಕ ಮಟ್ಟಿಗೆ ಇಂಗ್ಲಿಷ್ ಮತ್ತು ಕನ್ನಡ ಮಾತಾಡಬಲ್ಲ ವಿದ್ಯಾವಂತ ಬ್ರಾಹ್ಮಣರಾಗಿರುವುದು ಚಾರಿತ್ರಿಕವಾಗಿ ಅನಿವಾರ್ಯವಾಗಿತ್ತು. ಈ ಸಂಶೋಧನಾ ಸಹಾಯಕರು ಏನು ಹೇಳಿದರೋ ಅದೇ ಬಹುಮಟ್ಟಿಗೆ ದಾಖಲಾಯಿತು ಮತ್ತು ಮುಂದಿನ ಇತಿಹಾಸಕಾರರಿಗೆ ಅದುವೇ ಆಕರ ಸಾಮಗ್ರಿಯಾಯಿತು. ಅವಿಭಜಿತ ದಕ ಜಿಲ್ಲೆಯಲ್ಲಿ ಓಡಾಡಿದ ಇವರುಗಳು ಉಡುಪಿಯ ಎಂಟು ಮಠಗಳ ಕುರಿತು ಮತ್ತು ಜಿಲ್ಲೆಯ ಅನೇಕ ದೇವಾಲಯಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಅಲ್ಲಿಯೇ ಜನಪ್ರಿಯವಾಗಿದ್ದ ಯಕ್ಷಗಾನ, ಭೂತಾರಾಧನೆ, ಕೊರಗರ ಕುಣಿತ ಇತ್ಯಾದಿಗಳ ಬಗ್ಗೆ ಒಂದು ಮಾತೂ ಬರೆದಿಲ್ಲ. ಈ ಪ್ರಕ್ರಿಯೆಗಳು ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿಯ ಬಗೆಗಣ ತಿಳಿವಳಿಕೆಗಳನ್ನು ರೂಪಿಸಿದ ಬಗೆಯನ್ನು ಅರ್ಥಮಾಡಿಕೊಳ್ಳಲು ಕೈಫಿಯತ್ತುಗಳನ್ನು ಜಾಗ್ರತೆಯಾಗಿ ಓದಬೇಕು. ೧೭೮೩ರಿಂದ ೧೮೨೦ರವರೆಗಣ ಅವಧಿಯಲ್ಲಿ ಕರ್ನಾಟಕದಲ್ಲಿ ಕೆಲಸ ಮಾಡಿದ ಕರ್ನಲ್ ಮೆಕೆಂಜಿಯ ಸಹಾಯಕರಾಗಿದ್ದ ಪುಲಿಗಡ್ಡ ಮಲ್ಲಯ್ಯ, ವೆಂಕಟರಾವ್, ನಾರಾಯಣ ರಾವ್, ವಿಠ್ಠಲ ರಾವ್, ಬಾಬೂ ರಾವ್, ಆನಂದ ರಾವ್, ಕವಲ್ಲಿ ವೆಂಕಟಬೋರಯ್ಯ, ವೆಂಕಟಲಕ್ಷ್ಮಯ್ಯ, ವೆಂಕಟರಾಮಸ್ವಾಮಿ- ಎಲ್ಲರೂ ಬ್ರಾಹ್ಮಣರಾಗಿದ್ದರು.
ಬ್ರಿಟಿಷ್ ಆಡಳಿತಗಾರರು ಮತ್ತು ವಿದ್ಯಾವಂತ ಬ್ರಾಹ್ಮಣರು ಜೊತೆಯಾಗಿಯೇ ಸಿದ್ಧಪಡಿಸಿದ ದಾಖಲೆಗಳು ನಮ್ಮ ಚರಿತ್ರೆಗೆ ಆಕರಗಳಾದಾಗ ಚರಿತ್ರೆ ರಚನೆಯ ವಿಧಾನಗಳು ಯಾವ ಸ್ವರೂಪವನ್ನು ಪಡೆದುಕೊಂಡುವು ? ಮತ್ತು ಇಂಥ ಆಕರಗಳನ್ನು ಬಳಸಿಕೊಂಡು ಬರೆಯಲಾದ ಚರಿತ್ರೆಯನ್ನು ಅವು ಹೇಗೆ ನಿಯಂತ್ರಿಸಿದವು ಎಂಬುದನ್ನು ತಿಳಿದುಕೊಳ್ಳಲು ಕೈಫಿಯತ್ತುಗಳು ಪ್ರಮುಖ ಆಕರ ಸಾಮಗ್ರಿಗಳಾಗಿ ಸಹಾಯ ಮಾಡುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸಂಶೋಧನೆಗಳು ಇನ್ನಷ್ಟು ಮುಂದುವರಿಯಬೇಕಾಗಿರುವ ಅವಶ್ಯಕತೆಯನ್ನು ಮನಗಂಡು ಈ ಪುಟ್ಟ ಪುಸ್ತಕವನ್ನು ಬರೆಯಲಾಗಿದೆ. ಕನ್ನಡ ವಿವಿಯ ಹಸ್ತಪ್ರತಿಶಾಸ್ತ್ರ ವಿಭಾಗದ ರಜತ ಮಹೋತ್ಸವ ಸಂಭ್ರಮದ ಭಾಗವಾಗಿ ಈ ಪುಸ್ತಕ ಪ್ರಕಟವಾಗಿದೆ.

 

  • ಪುರುಷೋತ್ತಮ ಬಿಳಿಮಲೆ

 

1 review for ಕನ್ನಡ ಕೈಫಿಯತ್ತುಗಳು | Kannada Kaifiyattuagalu

  1. Nagappa

    Very Good

Add a review

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208