Chiranth Prakashana Online Book Store

Sale!

ಕವಿರನ್ನವಿರಚಿತಮ್ ಸಾಹಸಭೀಮವಿಜಯಮ್ : ಗದಾಯುದ್ಧಮ್ / Kaviranna Virachitam Sahasabhimavijayam : Gadayuddham

225.00

Name of the Author – ಟಿ.ವಿ. ವೆಂಕಟಾಚಲ ಶಾಸ್ತ್ರೀ
Publisher – ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Year of Publishing – 2022
Printing Number – 1
Cover Page – ಸಾದಾ
Pages – 307
Book Size – 1/8 Demy Size
ISBN –

(For purchase of Rs 299/-and above)

About the Book ana Author

ಸಂಪಾದಕರು: ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ
ರನ್ನ ಕವಿಯ (ಕ್ರಿ.ಶ. 993) “ಸಾಹಸಭೀಮವಿಜಯಮ್” (“ಗದಾಯುದ್ಧಮ್”) ಎಂಬ ಜನಪ್ರಿಯ, ವಿದ್ವಜ್ಜನಪ್ರಿಯ ಚಂಪೂಕಾವ್ಯದ (ಸು.1000) ಹೊಸ ಪರಿಷ್ಕರಣವಿದು.

ಹಸ್ತಪ್ರತಿಗಳ ಲಭ್ಯತೆಯ ಕೊರತೆ, ಪಾಠನಿರ್ಣಯದ ಹಲವು ಬಗೆಯ ಕ್ಲೇಶಗಳು ಇವುಗಳ ನಡುವೆಯೇ ಈ ಪರಿಚಿತಪಠ್ಯವನ್ನು ವ್ಯಾಕರಣ-ಛಂದಸ್ಸು, ಅರ್ಥ-ಆಶಯ ಇವುಗಳ ದೃಷ್ಟಿಯಿಂದ ಇನ್ನಷ್ಟು ಉತ್ತಮಪಡಿಸುವ ಒಂದು ಸಂಪಾದಕೀಯ ಪ್ರಯತ್ನ ಇಲ್ಲಿಯದು. ಈ ಪ್ರಯತ್ನದಿಂದ ಕಾವ್ಯದ ವಾಚನ-ವ್ಯಾಖ್ಯಾನಗಳಿಗೆ, ಅಧ್ಯಯನ ಸಂಶೋಧನೆಗಳಿಗೆ ಹೆಚ್ಚು ಅನುಕೂಲವಾಗುವುದೆಂದು ಸಂಪಾದಕರ, ಪ್ರಕಾಶಕರ ನಿರೀಕ್ಷೆಯಾಗಿದೆ.
ಕಾವ್ಯಾಭ್ಯಾಸದ ಸಾಧನ ಸಾಮಗ್ರಿಯನ್ನು ಹೆಚ್ಚಿಸುವ ಅನುಬಂಧಗಳಲ್ಲಿ ಕೂಡ ಕೆಲವು ಹಳೆಯ ವಿಮರ್ಶೆ ವಿವೇಚನೆಗಳು ಇನ್ನಷ್ಟು ಪರಿಷ್ಕಾರಗೊಂಡಿವೆ, ಹೊಸ ಸಂಗತಿಗಳು ಸೇರಿವೆ. ಇವುಗಳ ಅನುಕ್ರಮ :
1. ಸಂಪಾದಕೀಯ ಪಾಠಪಟ್ಟಿಕೆ

2. ಪಾಠವಿಚಾರದ ಟಿಪ್ಪಣಿಗಳು

3. ವಸ್ತುವಿಚಾರದ ಟಿಪ್ಪಣಿಗಳು

4. ಐತಿಹಾಸಿಕ ವಿವರಗಳು : ವಿಶ್ಲೇಷಣೆ, ವಂಶಾವಳಿ

5. ಶಬ್ದಾರ್ಥಕೋಶ

6. ಹಸ್ತಪ್ರತಿಗಳ ಸೂಚಿ, ಪೀಳಗೆ ಮತ್ತು ಪರಿಷ್ಕರಣಗಳು

7. ಪದ್ಯಗಳ ಅಕಾರಾದಿ ಸೂಚಿ.

ಪ್ರೊ. ತೀ.ನಂ. ಶ್ರೀಕಂಠಯ್ಯನವರ “ರನ್ನ ಕವಿ ಮತ್ತು ಅವನ ಕೃತಿಗಳು” ಎಂಬ ಉಚಿತವಿಸ್ತಾರದ ಉಪನ್ಯಾಸ-ಲೇಖನ ಈ ಪರಿಷ್ಕರಣದ ಪೀಠಿಕೆಯಾಗಿದ್ದು, ಕವಿಕಾವ್ಯ ಪರಿಚಯದ ಹಾಗೂ ಸಹೃದಯ ವಿಮರ್ಶೆಯ ಒಂದು ಸೊಗಸಾದ ಪ್ರವೇಶಿಕೆಯೇ ಆಗಿದೆ.

– ಬೆನ್ನುಡಿಯಿಂದ

Reviews

There are no reviews yet.

Be the first to review “ಕವಿರನ್ನವಿರಚಿತಮ್ ಸಾಹಸಭೀಮವಿಜಯಮ್ : ಗದಾಯುದ್ಧಮ್ / Kaviranna Virachitam Sahasabhimavijayam : Gadayuddham”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208