Chiranth Prakashana Online Book Store

Sale!

ಚರಿತ್ರೆ ದರ್ಶನ ಕಲೆ ಮತ್ತು ಸಂಶೋಧನಾ ಮಾರ್ಗ / Charitre Darshana Kale Mattu Samshodhana Maarga

400.00

Name of the Author – ಡಾ. ಎ. ಸಿ. ನಾಗೇಶ್ ಮತ್ತು ಪರಮೇಶ್ವರ ಎಚ್.
Publisher – ಚಿರಂತ್ ಪ್ರಕಾಶನ
Year of Publishing – 2021
Printing Number  – 1
Cover Page – ಉತ್ತಮ
Pages – 480
Book Size – ⅛
ISBN – 978-81-955560-0-7

(For purchase of Rs 299/-and above)

About the Book

’ಚರಿತ್ರೆ ದರ್ಶನ ಮತ್ತು ಸಂಶೋಧನಾ ಮಾರ್ಗ’ ಡಾ. ಎ. ಸಿ. ನಾಗೇಶ ಮತ್ತು ಎಚ್‌. ಪರಮೇಶ್ವರ ಅವರ ಚೊಚ್ಚಲ ಕೃತಿಯಾಗಿದೆ. “ಜಾಗತೀಕರಣದಂತಹ ಪರಿಸ್ಥಿತಿಯೊಳಗೆ ನಿಂತು ಮನುಷ್ಯ ಜೀವನದ ಯಶೋಗಾಥೆಗಳನ್ನು ಮಾತೃ ಭಾಷೆಯಲ್ಲಿಯೇ ಅರ್ಥೈಸುವ ಮತ್ತು ಕಟ್ಟುವ ಚರಿತ್ರೆಯ ಕೃಷಿ ಚಟುವಟಿಕೆಗಳು ಸರಳ ಸುಲಭವಲ್ಲ. ಚರಿತ್ರೆ ಎಂದರೆ, ಸ್ಪಷ್ಟವಾಗಿ ಇಂಥದ್ದೇ ಎನ್ನುವುದಕ್ಕೆ ಬದಲಾಗಿ ಅದು ಹಿಂದೆ ನಡೆದಿರಬಹುದಾದ ಘಟನೆಗಳ ಬಗೆಗೆ ನಮಗಿರುವ ಜ್ಞಾನ ಎಂಬ ತಿಳಿವಳಿಕೆ ಬಹುಮುಖ್ಯ.

ಚರಿತ್ರೆ ಎಂದರೇನು? ಹಿಂದಿನ ರಾಜರ ಕತೆಗಳನ್ನೇ ಮತ್ತೆ ಮತ್ತೆ ಹೇಳುವುದು, ಅದೇನು ಬದಲಾಗುತ್ತದೆಯೇ? ಅದೇ ಅಶೋಕ, ಅದೇ ಅಕ್ಟರ್. ಇವೆಲ್ಲವೂ ಧ್ವನಿ ಸುರುಳಿಗಳ ಶ್ರವಣ ಎಂದು ಲೇವಡಿ ಮಾಡುವ ಜನರಿದ್ದಾರೆ. ಇವರಿಗೆ ಚರಿತ್ರೆ ಒಂದು ಬದಲಾಗುವ ಅಪೂರ್ಣ ಜ್ಞಾನ: ನಾವೀಗ ತಿಳಿದದ್ದು ಹಿಂದಿನವರಿಗೆ ತಿಳಿದಿರಲಿಲ್ಲ; ನಮಗೀಗ ತಿಳಿಯದ್ದು ಮುಂದಿನವರು ತಿಳಿದಾರು ಎಂಬ ಅರಿವಿಲ್ಲ. ಚರಿತ್ರೆ ಬಲು ಪ್ರಾಚೀನ ಮತ್ತು ಅಮೋಘವಾಗಿದೆ. ಬಹುತೇಕ ಮಹನೀಯರ ಚಾರಿತ್ರಿಕ ಜ್ಞಾನ ಇತ್ತೀಚಿನದು ಎಂದು ತಿಳಿದಿಲ್ಲ. ಅನೇಕ ಭಾರತೀಯರು ಐರೋಪ್ಯರ ಸಂಪರ್ಕದಿಂದಾಗಿ ಚರಿತ್ರೆ ಒಂದು ಅಧ್ಯಯನ ವಿಷಯವಾಯಿತೆಂದು ಭಾವಿಸಿದ್ದಾರೆ” ಎಂದು ಲೇಖಕರು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಈ ನಿಲುವು ಅವರ ಈ ಕೃತಿಯ ಹಿಂದಿನ ಪ್ರೇರಣೆಯಾಗಿದೆ. ಹೊಸದಾದ ನೋಟವನ್ನು ಪರಿಣಾಮಕಾರಿಯಾಗಿ ಅರ್ಥೈಸುವುದರಲ್ಲಿ ಎರಡು ಮಾತಿಲ್ಲ ಎಂಬುದನ್ನು ಓದುಗರು ಮನಗಾಣಬೇಕು.

About the Authors

ಡಾ. ಎ. ಸಿ. ನಾಗೇಶ ರವರು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕು ತುಂಗ-ಮಾಲತಿ ನದಿಗಳ ಸಂಗಮ ದಡದ ಪುಟ್ಟ ಗ್ರಾಮ ಆಲಗೇರಿಯಲ್ಲಿ ಜನಿಸಿದರು. ತಂದೆ ಚೆನ್ನಪ್ಪ, ತಾಯಿ ಕಮಲಮ್ಮ. ಆಲಗೇರಿ, ದುರ್ವಾಸಪುರ, ತೀರ್ಥಹಳ್ಳಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದರು. ಶಿವಮೊಗ್ಗದ ಡಿ.ವಿ.ಎಸ್ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದರು. ೧೯೮೫-೮೭ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಚರಿತ್ರೆ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ನಡೆಸಿ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದರು. ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಗೊಂಡು ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸೇವೆಗೆ ಸೇರಿಕೊಂಡರು. ಶ್ರೀಯುತರು ಚಾರಿತ್ರಿಕ ಘಟನೆಗಳ ಸಂಶೋಧನಾ ಗೀಳು ಹಿಡಿಸಿಕೊಂಡು ಸಂಶೋಧನಾ ಕೃಷಿಯಲ್ಲಿ ತೊಡಗಿರುವರು.  ಅನೇಕ ಚಾರಿತ್ರಿಕ ಲೇಖನಗಳನ್ನು ಮಂಡಿಸಿದ್ದಾರೆ. ವೈಚಾರಿಕ ಚರಿತ್ರೆಯನ್ನು ಪ್ರತಿಪಾದಿಸುತ್ತಿದ್ದಾರೆ.

ಎಚ್. ಪರಮೇಶ್ವರ ರವರು ಶಿವಮೊಗ್ಗ ಜಿಲ್ಲೆ ಹೊಸನಗರ  ತಾಲೂಕು ದೋಬೈಲು ಗ್ರಾಮ ನೇರಲಸರದಲ್ಲಿ ತಂದೆ ಹೊನ್ನನಾಯ್ಕಮತ್ತು ತಾಯಿ ದೇವಮ್ಮ ರೈತ ದಂಪತಿಯ ಮಗನಾಗಿ ಜನಿಸಿದರು. ದೋಬೈಲು ಹಾಗೂ ಹೊಸನಗರ ಶಾಲೆಗಳಲ್ಲಿ ಕ್ರಮವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದರು. ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಹೊಸನಗರದಲ್ಲಿ ವ್ಯಾಸಂಗ ಮುಂದುವರಿಸಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದ ಚರಿತ್ರೆ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ಪೂರೈಸಿ ಎಂ.ಎ. ಪದವಿ ಪಡೆದರು. ಚರಿತ್ರೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಮತ್ತು ಕಾಳಜಿ ಹೊಂದಿದ್ದು, ವಸುನಿಷ್ಠ ಮತ್ತು ವೈಚಾರಿಕ ಇತಿಹಾಸವನ್ನು ಪ್ರತಿಪಾದಿಸುತ್ತಿದ್ದಾರೆ.

Reviews

There are no reviews yet.

Be the first to review “ಚರಿತ್ರೆ ದರ್ಶನ ಕಲೆ ಮತ್ತು ಸಂಶೋಧನಾ ಮಾರ್ಗ / Charitre Darshana Kale Mattu Samshodhana Maarga”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208