Chiranth Prakashana Online Book Store

Sale!

ನಾ ಅಲೆಯ ಉಬ್ಬರವಾದೆ / Naa Aleya Ubbaravaade

293.00

Name of the Author – ಗೀತಾ ಹರಿಹರನ್, ಅನು : ಗಾಯತ್ರಿ ಎನ್
Publisher –ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Year of Publishing – 2022
Printing Number – 1
Cover Page – ಸಾದಾ
Pages – 296
Book Size – ⅛
ISBN – 978-93-924516-6-9

Category:

(For purchase of Rs 299/-and above)

About the Book

ಗೀತಾ ಹರಿಹರನ್ ಅವರ ಇಂಗ್ಲಿಷ್ ಕಾದಂಬರಿ ‘I Have Become The Tide’ ಕಾದಂಬರಿಯ ಕನ್ನಡಾನುವಾದ. ಕನ್ನಡಕ್ಕೆ ಡಾ. ಎನ್. ಗಾಯತ್ರಿ ಅವರು ಅನುವಾದಿಸಿದ್ದಾರೆ. ಇದೊಂದು ಶಕ್ತಿಯುತ ಬರವಣಿಗೆಯಾಗಿದ್ದು, ಬಲು ಸುಂದರ ಕಲ್ಪನೆಯೊಂದು ಈ ಕೃತಿಯಲ್ಲಿ ಬಿಚ್ಚಿಕೊಳ್ಳುತ್ತದೆ. 12ನೇ ಶತಮಾನದ ಸಂತನ ಕಥೆಯ ಹಿನ್ನೆಲೆಯಲ್ಲಿ ವರ್ತಮಾನದ ಕಥನಕ್ಕೆ ಕನ್ನಡಿಯಾಗುವ ಹರಿವು ಈ ಕಾದಂಬರಿಯಲ್ಲಿದೆ.

About the Author

ಡಾ. ಎನ್. ಗಾಯತ್ರಿ ಅವರು 1957ರ ಜನವರಿ 17ರಂದು ಬೆಂಗಳೂರಿನಲ್ಲಿ ಜನಿಸಿದರು. ಸಾಹಿತ್ಯದಲ್ಲಿ ಎಂ.ಎ. ಹಾಗೂ ಪಿಎಚ್.ಡಿ. ಪದವಿ ಪಡೆದರು.   ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ  ‘ಅಚಲ’ ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿ ಕೊಟ್ಟವರು. ಈಗ ‘ಹೊಸತು’ ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ‘ಮಹಿಳೆ : ಬಿಡುಗಡೆಯ ಹಾದಿಯಲ್ಲಿ’, ‘ಮಹಿಳಾ ಚಳವಳಿಯ ಮಜಲುಗಳು’, ‘ಮುಖಾಮುಖಿ’, ‘ಕ್ಲಾರಾ ಜೆಟ್ಕಿನ್, ‘ಮಹಿಳಾ ಮೀಸಲಾತಿ’ ಮತ್ತು ‘ಲಿಂಗ ರಾಜಕಾರಣ’,  ‘ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳು’, ‘ನಾನೇಕ ನಾಸ್ತಿಕ (ಅನುವಾದ),  ಬಿ.ಎನ್. ಸುಮಿತ್ರಾಬಾಯಿಯವರೊಡನೆ ಸಂಪಾದಿತ  ಮಹತ್ತರ ಕೃತಿ ‘ದಕ್ಷಿಣ ಭಾರತದ ಸಾಂಸ್ಕೃತಿಕ ಅಧ್ಯಯನದ ಸಾಂಸ್ಕೃತಿಕ ಕೋಶ’ ಗ್ರಂಥವನ್ನು ಪ್ರೊ. ಜಿ. ರಾಮಕೃಷ್ಣ ಮತ್ತು ದೇವಿಪ್ರಸಾದ್ ಚಟ್ಟೋಪಾಧ್ಯಾಯರೊಡನೆ ಸಂಪಾದಿಸಿದ್ದಾರೆ. ’ಮಹಿಳೆ ಬಿಡುಗಡೆಯ ಹಾದಿಯಲ್ಲಿ’ ಕೃತಿಗೆ ‘ಸಾವಿತ್ರಮ್ಮ ದತ್ತಿ ಪ್ರಶಸ್ತಿ’ ಹಾಗೂ ’ಮಹಿಳಾ ಚಳವಳಿಯ ಮಜಲುಗಳು’ ಕೃತಿಗೆ ಕಸಾಪ ದತ್ತಿನಿಧಿ ಪ್ರಶಸ್ತಿ ದೊರೆತಿದೆ.

 

Reviews

There are no reviews yet.

Be the first to review “ನಾ ಅಲೆಯ ಉಬ್ಬರವಾದೆ / Naa Aleya Ubbaravaade”

Your email address will not be published.

Related Books

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208