Chiranth Prakashana Online Book Store

Sale!

ಪ್ರವಾದಿ : ಭಾವಾರ್ಥ ಸಹಿತ / Pravadi : Bhavartha Sahita

167.00

Name of the Author – ಖಲೀಲ್ ಗಿಬ್ರಾನ್, ಅನು : ಡಾ. ಕೆ ಸರೋಜಾ
Publisher – ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Year of Publishing – 2013
Printing Number – 3
Cover Page – ಸಾದಾ
Pages – 392
Book Size – ⅛
ISBN –

Availability: 1 in stock (can be backordered)

Availability: 1 in stock (can be backordered)

Category:

(For purchase of Rs 299/-and above)

About the Book

ಖಲೀಲ್ ಗಿಬ್ರಾನ್ ಆಧುನಿಕ ಕಾಲವು ಕಂಡ ಅಪರೂಪದ ಕವಿ, ಕಲಾವಿದ ಹಾಗೂ ತತ್ತ್ವಜ್ಞಾನಿ…
ಖಲೀಲ್ ಗಿಬ್ರಾನ್ ಹಲವು ಕೃತಿಗಳನ್ನು ಬರೆದಿರುವ ನಾದರೂ, ಅವುಗಳಲ್ಲಿ ಅತ್ಯಂತ ಮುಖ್ಯವಾಗಿರುವುದು, ಅವನಿಗೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟದ್ದು ಹಾಗೂ ನನಗೆ ಮೆಚ್ಚಿಗೆಯಾಗಿರುವುದು ಅವನ ‘ದಿ ಪ್ರಾಫೆಟ್’ (ಪ್ರವಾದಿ) ಎನ್ನುವ ಕೃತಿ. ಜಗತ್ತಿನ ಹಲವು ದೇಶಗಳಲ್ಲಿ ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ, “ಪ್ರವಾದಿ”ಯ ಪದ್ಯಗಳನ್ನು ಹಲವು ಸಂದರ್ಭ ಗಳಲ್ಲಿ ವಾಚಿಸುವ ಪದ್ಧತಿಯು ಬೆಳೆದು ಬಂದಿದೆ. (ನೆಲ್ಸನ್ ಮಂಡೇಲರ ಮರಣವಾದಾಗ ನಡೆದ ಕ್ರಿಯಾಕರ್ಮದಲ್ಲೂ ಖಲೀಲ್ ಗಿಬ್ರಾನನ “ಪ್ರವಾದಿ”ಯನ್ನು ವಾಚಿಸಿದ್ದರು) ಬಹುಶಃ ಇದು “ಪ್ರವಾದಿ” ಕೃತಿಯ ಜನಪ್ರಿಯತೆ, ಸಾರ್ಥಕತೆ ಹಾಗೂ ಅನಿವಾರ್ಯತೆಯನ್ನು ಸೂಚಿಸುತ್ತದೆ ಎನ್ನಬಹುದು.

ಯಾವುದೇ ಧರ್ಮವನ್ನು ಖಂಡಿಸದೆ, ಯಾವುದೇ ಧರ್ಮದ ಪಕ್ಷಪಾತಿಯಾಗದೆ, ಎಲ್ಲ ಧರ್ಮಗಳ ಸಾರವನ್ನು ಭಟ್ಟಿಯಿಳಿಸಿದಂತೆ, ಆದರೆ ಸಾಂಪ್ರದಾಯಿಕ ಧಾರ್ಮಿಕ ಚೌಕಟ್ಟಿಗೆ ಒಳಗಾಗದೆ ಸಂಪೂರ್ಣ ಭಿನ್ನವಾಗಿ ನಿಂತಿರುವುದು ಖಲೀಲ್ ಗಿಬ್ರಾನನ ವಿಶೇಷ ಲಕ್ಷಣ.

ಕವಿಯ ಮೂಲ ಆಶಯವನ್ನು ಸೊಗಸಾಗಿ ಕನ್ನಡದಲ್ಲಿ ಸೆರೆಹಿಡಿದ ಲೇಖಕಿ ಡಾ.ಸರೋಜಾ ಅವರ ಸಾಮರ್ಥ್ಯವನ್ನು ಶ್ಲಾಘಿಸಬಹುದು. ಲೇಖಕಿಯವರ ಹೊಳಹುಗಳು ಹಾಗೂ ಟಿಪ್ಪಣಿಗಳು ಗಿಬ್ರಾನನ ಆಶಯವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ.

ಡಾ. ನಾ. ಸೋಮೇಶ್ವರ (ಮುನ್ನುಡಿಯಿಂದ…)

Reviews

There are no reviews yet.

Be the first to review “ಪ್ರವಾದಿ : ಭಾವಾರ್ಥ ಸಹಿತ / Pravadi : Bhavartha Sahita”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208