Chiranth Prakashana Online Book Store

Sale!

ಭಾರತದ ಸಮಾಜ ಮತ್ತು ಮತ ಸುಧಾರಕರು : ಒಂದು ಚಾರಿತ್ರಿಕ ನೋಟ / Bharatada Samaaja Mattu Mata Sudhaarakaru

180.00

Name of the Author – ಡಾ. ಎ. ಸಿ. ನಾಗೇಶ್ ಮತ್ತು ಪರಮೇಶ್ವರ ಎಚ್.
Publisher – ಚಿರಂತ್ ಪ್ರಕಾಶನ
Year of Publishing – 2022
Printing Number  – 1
Cover Page – ಸಾದಾ
Pages – 152
Book Size – ⅛
ISBN – 978-81-955560-1-4

(For purchase of Rs 299/-and above)

About the Book

ಚರಿತ್ರೆ ಹತ್ತುಹಲವು ಶೀರ್ಷಿಕೆಗಳಲ್ಲಿ ಮೂಡಿ ಬಂದಿರುವುದು ಎಲ್ಲರೂ ತಿಳಿದಿರುವ ವಿಚಾರವೇ ಆಗಿದೆ. ಅದು ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ವೈಜ್ಞಾನಿಕ, ವೈದ್ಯಕೀಯ, ನೈತಿಕ ಮತ್ತು ಮಾನವೀಯ ತಲೆಬರೆಹಗಳಲ್ಲಿ ಹೊರಹೊಮ್ಮಿದೆ. ಚರಿತ್ರೆಯ ಬಹುಮುಖ್ಯ ಗುರಿ-ಉದ್ದೇಶ-ಧ್ಯೇಯ ಸತ್ಯ ಮತ್ತು ಮೌಲ್ಯಗಳ ಪ್ರತಿಪಾದನೆಯಾಗಿದೆ. ಪೂರ್ವಜರ ಜೀವನಮೌಲ್ಯ ಮತ್ತು ಪರಿಶುದ್ಧತೆಯನ್ನು ವಸ್ತುನಿಷ್ಠವಾಗಿ ಜನರ ಮುಂದಿಡುವುದಾಗಿದೆ. ಇದು ವರ್ತಮಾನ ಮನುಷ್ಯ ಜೀವನದ ಲೋಪದೋಷ ನಿವಾರಣೆಗೆ ಉತ್ತಮ ಪರಿಕರವಾಗುತ್ತದೆ. ಆದುದರಿಂದ ಚರಿತ್ರೆ ಕೃಷಿಕಾರ್ಯ ಅತ್ಯಂತ ಶ್ರೇಷ್ಠ. ಏಕೆಂದರೆ, ಅದು ಹಿರಿಕರ ಸಾಧನೆಯನ್ನು ತಿಳಿಸುತ್ತದೆ. ಅದರ ಹೂರಣವನ್ನು ಉಣಬಡಿಸುತ್ತದೆ. ಆದರೆ ಇದು ಸುಖದ ಕಾರ್ಯ ಅಲ್ಲ. ಅದರಲ್ಲೂ ಸಾಮಾಜಿಕ ಮತ್ತು ರಿಲಿಜಿ಼ಯಸ್ ಚರಿತ್ರೆಯ ಕೃಷಿಕಾರ್ಯ ಎಂದರೆ ಮೈಮೇಲೆ ಕೆಂಪು ಇರುವೆ ಬಿಟ್ಟುಕೊಂಡಂತೆ, ವಿಷಪಾನ ಮಾಡಿದಂತೆ, ಶತ್ರು ಸಂತಾನ ಬೆಳೆಸಿಕೊಂಡಂತೆಯೇ ಸರಿ. ಏಕೆಂದರೆ, ಶುದ್ಧ ಸಾಮಾಜಿಕ ಮತ್ತು ಮತ ಚರಿತ್ರೆಯ ಬರೆಹ ಪ್ರಕಟಣೆಗೆ ಹಲವು ಅಡೆತಡೆಗಳು ಎದುರಾಗುತ್ತವೆ. ನಿಂದನೆ-ಅಪಮಾನ-ದಾವೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸಾಮಾಜಿಕ ಮತ್ತು ಮತ ಚರಿತ್ರೆಯ ನಿರೂಪಕ ಎಷ್ಟು ಯೋಚಿಸಿ ಬರೆದರೂ ಅಪಾಯ ತಪ್ಪಿದ್ದಲ್ಲ.

ಇವತ್ತಿಗೂ ಕೂಡ ಭಾರತದ ಸಮಾಜ ಮತ್ತು ಮತ ಕ್ಷೇತ್ರ ದೋಷಮುಕ್ತವಾಗಿಲ್ಲ. ಜಾತ್ಯತೀತ ಗುಣಗಳನ್ನು ಮೈಗೂಡಿಸಿಕೊಂಡಿಲ್ಲ. ದೇಶದ ಪ್ರಗತಿಗೆ ಪೂರಕವಾಗಿಲ್ಲ. ಶೋಷಿತರ ಕಲ್ಯಾಣ ಮರೀಚಿಕೆ ಎನಿಸಿದೆ. ದೇಶದಲ್ಲಿ ಕೋಮುವಾದ, ಜಾತಿ ಸಂಘರ್ಷ, ಅಸಮಾನತೆ, ಶೋಷಣೆಗಳು ದಿನೇ ದಿನೇ ಹಿಗ್ಗುತ್ತಿವೆ. ಮಹಿಳಾ ಸುರಕ್ಷತೆ ಕಣ್ಮರೆಯಾಗುತ್ತಿದೆ. ಮರ್ಯಾದಾ ಹತ್ಯೆಗಳು ಹೆಚ್ಚುತ್ತಿವೆ. ಪರಸ್ಪರರ ಪ್ರೀತಿ ವಿಶ್ವಾಸ ಕಳಚುತ್ತಿದೆ. ಚರಿತ್ರೆಯಲ್ಲಿ ಆಧುನಿಕ ಭಾರತದ ಸಮಾಜ ಮತ್ತು ಮತ ಸುಧಾರಕರ ವಿಚಾರಗಳು ಆಗಸ್ಟ್ 15, 1947ರ ದೇಶ ವಿಭಜನೆಗೆ ಕಾರಣವಾದವೆಂಬ ಆರೋಪಗಳಿವೆ. ಇಲ್ಲಿ ಅವುಗಳ ಪರಾಮರ್ಶನ ಮಾಡಲಾಗಿದೆ. ಓದುಗರು ಭಾರತದ ಸಮಾಜ ಮತ್ತು ಮತ ಸುಧಾರಕರ ತತ್ವ ಹಾಗೂ ಚಾರಿತ್ರಿಕ ಮೌಲ್ಯಗಳನ್ನು ತಿಳಿದುಕೊಳ್ಳುವುದಕ್ಕೆ ಈ ಕೃತಿ ಸಹಕಾರಿಯಾಗುತ್ತದೆ.

About the Authors

ಡಾ. ಎ. ಸಿ. ನಾಗೇಶ ರವರು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕು ತುಂಗ-ಮಾಲತಿ ನದಿಗಳ ಸಂಗಮ ದಡದ ಪುಟ್ಟ ಗ್ರಾಮ ಆಲಗೇರಿಯಲ್ಲಿ ಜನಿಸಿದರು. ತಂದೆ ಚೆನ್ನಪ್ಪ, ತಾಯಿ ಕಮಲಮ್ಮ. ಆಲಗೇರಿ, ದುರ್ವಾಸಪುರ, ತೀರ್ಥಹಳ್ಳಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದರು. ಶಿವಮೊಗ್ಗದ ಡಿ.ವಿ.ಎಸ್ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದರು. ೧೯೮೫-೮೭ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಚರಿತ್ರೆ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ನಡೆಸಿ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದರು. ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಗೊಂಡು ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸೇವೆಗೆ ಸೇರಿಕೊಂಡರು. ಶ್ರೀಯುತರು ಚಾರಿತ್ರಿಕ ಘಟನೆಗಳ ಸಂಶೋಧನಾ ಗೀಳು ಹಿಡಿಸಿಕೊಂಡು ಸಂಶೋಧನಾ ಕೃಷಿಯಲ್ಲಿ ತೊಡಗಿರುವರು. ಅನೇಕ ಚಾರಿತ್ರಿಕ ಲೇಖನಗಳನ್ನು ಮಂಡಿಸಿದ್ದಾರೆ. ವೈಚಾರಿಕ ಚರಿತ್ರೆಯನ್ನು ಪ್ರತಿಪಾದಿಸುತ್ತಿದ್ದಾರೆ.

ಎಚ್. ಪರಮೇಶ್ವರ ರವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ದೋಬೈಲು ಗ್ರಾಮ ನೇರಲಸರದಲ್ಲಿ ತಂದೆ ಹೊನ್ನನಾಯ್ಕಮತ್ತು ತಾಯಿ ದೇವಮ್ಮ ರೈತ ದಂಪತಿಯ ಮಗನಾಗಿ ಜನಿಸಿದರು. ದೋಬೈಲು ಹಾಗೂ ಹೊಸನಗರ ಶಾಲೆಗಳಲ್ಲಿ ಕ್ರಮವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದರು. ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಹೊಸನಗರದಲ್ಲಿ ವ್ಯಾಸಂಗ ಮುಂದುವರಿಸಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದ ಚರಿತ್ರೆ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ಪೂರೈಸಿ ಎಂ.ಎ. ಪದವಿ ಪಡೆದರು. ಚರಿತ್ರೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಮತ್ತು ಕಾಳಜಿ ಹೊಂದಿದ್ದು, ವಸುನಿಷ್ಠ ಮತ್ತು ವೈಚಾರಿಕ ಇತಿಹಾಸವನ್ನು ಪ್ರತಿಪಾದಿಸುತ್ತಿದ್ದಾರೆ.

 

 

Reviews

There are no reviews yet.

Be the first to review “ಭಾರತದ ಸಮಾಜ ಮತ್ತು ಮತ ಸುಧಾರಕರು : ಒಂದು ಚಾರಿತ್ರಿಕ ನೋಟ / Bharatada Samaaja Mattu Mata Sudhaarakaru”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208