Chiranth Prakashana Online Book Store

Sale!

ಮಧ್ಯಘಟ್ಟ | Madhyaghatta

225.00

: 1
: 2020
: 1/8 Demy Size
Category:

(For purchase of Rs 299/-and above)

About the Book and Author

Author-Image

 

 

 

 

  • ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ. ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು. ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ಹತ್ಯಾಕಾಂಡ, ಕಂಪ್ಯೂಟರ್ ಊಟ ಹಳ್ಳಿ ಮಾರಾಟ, ಪತ್ರಕರ್ತರೇ ಟೈಂ ಉಂಟಾ?, ಮಳೆ ಮನೆಯ ಮಾತುಕಥೆ, ಕಾನ್ ಬಾಗಿಲು, ಮಣ್ಣಿನ ಓದು, ಒಂದು ತುತ್ತಿನ ಕಥೆ, ಕ್ಷಾಮ ಡಂಗುರ, ಜಲ ವರ್ತಮಾನ, ಅನ್ನ ಕೊಡುವ ಅನನ್ಯ ತೋಟ – ತದ್ರೂಪಿ ಕಾಡು ( ಜಿ. ಕೃಷ್ಣ ಪ್ರಸಾದ್ ಅವರ ಜೊತೆ ಸಂಪಾದನೆ), ಒಡಲ ನೋವಿನ ತೊಟ್ಟಿಲ ಹಾಡು, ಪಶ್ಚಿಮ ಘಟ್ಟದಲ್ಲಿ ಮೋನೋಕಲ್ಚರ್ ಮಹಾಯಾನ, ಕಾನ್ ಚಿಟ್ಟೆ, ಹಸಿರು ಪುಸ್ತಕದ ಹಳೆಯ ಪುಟಗಳು, ಕಾಡು ನೆಲದ ಕಾಲಮಾನ, ಕಾನ್ಮನೆಯ ಕಥೆಗಳು, ಕಾವೇರಿ ಖಂಡ ಇತ್ಯಾದಿ. ಕರ್ನಾಟಕ ರಾಜ್ಯ ಸರ್ಕಾರದಿಂದ ಪರಿಸರ ಪತ್ರಿಕೋದ್ಯಮಿ ಪ್ರಶಸ್ತಿ, ಸುವರ್ಣ ಸುದ್ದಿವಾಹಿನಿಯ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಪತ್ರಕರ್ತರಿಗೆ ಪರಿಸರ ಕಾಳಜಿಯ ಪಾಠ ಹೇಳುವ ಶಿವಾನಂದ ಕಳವೆ ಅವರಿಗೆ ರಾಜ್ಯದ ವಿವಿಧ ಸಂಘಸಂಸ್ಥೆಗಳು ಗೌರವಿಸಿವೆ.
  • ಯಾವತ್ತಿಗೂ ಪಶ್ಚಿಮ ಘಟ್ಟದ ಕಾಡುಗಳು ನಮಗೆ ಅದರಲ್ಲೂ ಹಳೆಯ ಮೈಸೂರು ಪ್ರಾಂತ್ಯದವರಿಗೆ ನಿಗೂಢವೆ ಸರಿ. ಕಾರಂತರು, ಗಿರಿಮನೆ ಶ್ಯಾಮರಾವ್, ತೇಜಸ್ವಿ ಅವರ ಪುಸ್ತಕಗಳ ಮೂಲಕ ಘಟ್ಟ ಪರಿಚಯ ಅತವಾ ಯಾವಾಗಲಾದರೂ ಚಾರಣದ ಹಾದಿಯಲ್ಲಿ ಸಾಗಿರುವ ಅನುಭವವೇ ಹೊರತು ನಿಜವಾದ ಘಟ್ಟ ಪ್ರದೇಶದ ಜನರ ಜೀವನ ಶೈಲಿ, ಬವಣೆ, ವರ್ಷಕ್ಕೆ ೬ ತಿಂಗಳು ಸುರಿವ ಹುಚ್ಚು ಮಳೆ, ಕಾಡು ಮೃಗಗಳ ಉಪದ್ರವ. ‘ಅಡಿಕೆಗೆ ಕೊಳೆ ರೋಗ, ಕೈಹೊಲಿಗೆಯಲ್ಲಿ ಅಂಗಿ ಹೊಲಿಯುತ್ತಿದ್ದ ಕಾಲದಲ್ಲಿ ಒಂದೇ ಒಂದು ಅಂಗಿ ತೊಡದೆ ಜೀವನ ಸಾಗಿಸಿದವರೇ ಜಾಸ್ತಿ . ವರ್ಷಕ್ಕೆರಡು ಸೀರೆ ತಂದು ಕೊಟ್ಟರೆ ಹೆಂಗಸರಿಗೆ ಬೇಕಾದಷ್ಟು. ಎರಡು ಹೊತ್ತು ಊಟ ಮಾಡುವವರು ಅತ್ಯಂತ ಶ್ರೀಮಂತರು ‘ ಕಥೆಯಲ್ಲಿ ಹಿರಿಯರು ಹೇಳುತಿದ್ದ ಸಾಲುಗಳಿವು.
  • ಕಥೆ ಶುರುವಾಗುವುದು ಕೇರಳದ ಕುಂಬಳೆ ಸೀಮೆಯ ಶ್ರೀದೇವಿಯನ್ನು ಹೊಸಕಟ್ಟಿಯ 60 ವರ್ಷದ ಗೋಪಯ್ಯ ಹೆಗಡೆಗೆ ಕರೆತಂದು ಮದುವೆ ಆದಾಗಿನಿಂದ ದಟ್ಟ ಕಾಡಿನೊಂದಿಗೆ ಬೆಸೆದುಗೊಂಡಿದೆ. ಶ್ರೀದೇವಿಯ ತಾಯಿ ಭೂದೇವಿ ತನ್ನ ಮಗಳನ್ನು ನೋಡಲು ಶಿರಸಿಯ ಘಟ್ಟದವರೆಗೆ ನಡೆದುಕೊಂಡು ಬಂದ ಸಾಹಸದ ಜೊತೆಗೆ ತನ್ನ ಮಗ ಜಮೀನು ಮಾಡಿ ಮದುವೆ ಯಾಗಿ ನಿಲ್ಲುವವರೆಗಿನ ಮೂವತ್ತು ವರ್ಷಗಳ ಕಥೆ ಸಾಗುತ್ತದೆ. ಶಿರಸಿಯು ಬದಲಾವಣೆಯ ಬೇರುಗಳು ಒಂದೊಂದಾಗಿ ಬಿಟ್ಟುಕೊಳ್ಳಲು ತನ್ನ ಹಳೆಯ ಛಾಪು ಕಳೆದುಕೊಂಡು ಹೊಸ ಪರ್ವ ಬಂದಿದ್ದರೊಂದಿಗೆ ಕಥೆಯು ಮುಗಿಯುತ್ತದೆ.

Reviews

There are no reviews yet.

Be the first to review “ಮಧ್ಯಘಟ್ಟ | Madhyaghatta”

Your email address will not be published.

Related Books

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208