Chiranth Prakashana Online Book Store

Sale!

ಲಕ್ಕಣ್ಣ ದಂಡೇಶ ಮತ್ತು ಶಿವತತ್ತ್ವ ಚಿಂತಾಮಣಿ / Lakkanna Dandesha Mattu Shivatatva Chintamani

720.00

Name of the Author – ಪ್ರೊ. ಡಿ.ವಿ. ಪರಶಿವಮೂರ್ತಿ, Prof. D V Parashivamurthy
Publisher – ಜಿ.ಎಸ್.ಎಸ್. ಟ್ರಸ್ಟ್, ತುಮಕೂರು, GSS Trust Tumkur
Year of Publishing – 2022
Printing Number – 1
Cover Page – ಉತ್ತಮ
Pages – 800
Book Size – 1/8 Demy Size
ISBN –

(For purchase of Rs 299/-and above)

About the Book and Athour

ಲಕ್ಕಣ್ಣ ದಂಡೇಶ : ಕಾಲ ಸು. ೧೪೧೦- ೧೪೬೩. ಈತನು ವಿಜಯನಗರದ ಪ್ರೌಢದೇವರಾಯನ ಆಶ್ರಯದಲ್ಲಿದ್ದ ಪ್ರಾಂತ್ಯಾಧಿಕಾರಿ ಹಾಗೂ ದಂಡನಾಯಕ . ಲಕ್ಕಣನಾಯಕ, ಲಕ್ಷ್ಮಣವೊಡೆಯ ಮುಂತಾದ ಹೆಸರುಗಳಿವೆ.  ಹೊಸಪಟ್ಟಣ ಜನ್ಮಸ್ಥಳ ಜನ್ಮಸ್ಥಳ. ಇವನ ವಿಚಾರವನ್ನು ತಿಳಿಸುವ ೧೩ ಶಾಸನಗಳು ದೊರೆತಿವೆ. ಲಕ್ಕಣ ದಂಡೇಶನು ಉಭಯಭಾಷಾ (ಕನ್ನಡ ಮತ್ತು ಸಂಸ್ಕೃತ) ಪಂಡಿತನಾಗಿದ್ದನು. ‘ವೀರಶೈವ ಸಂಸ್ಕೃತ’ವನ್ನು ನಾಡಿನ ವಿವಿದೆಡೆಯಲ್ಲಿ ಹರಡುವಂತೆ ಜನಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿ, ಈತನ ‘ಶಿವತತ್ವ ಚಿಂತಾಮಣಿ’ ವಾರ್ಧಕ ಷಟ್ನದಿ ಯಲ್ಲಿದ್ದು, ವೀರಶೈವ ಧರ್ಮದ ತತ್ವಕೋಶದಂತಿದೆ. ಕಾವ್ಯ ದೃಷ್ಟಿಯಿಂದ ಇದೊಂದು ಪುರಾಣದಂತಿದ್ದರೂ ನವರೀತಿಯ ವರ್ಣನೆಗಳಿಂದ ಒಂದು ಸುಂದರ ಕಾವ್ಯವಾಗಿ ಕೃತಿಕಾರ ರೂಪಿಸಿದ್ದಾನೆ. ಭಕ್ತಿರಸದೊಡನೆ ಇತರ ರಸಗಳು ಪೋಷಕವಾಗಿ ಕಾವ್ಯಸಂಪತ್ತು ಹೆಚ್ಚಿದೆ. ಕಾವ್ಯಶೈಲಿ ಸರಳ ಸುಂದರವಾಗಿದೆ. ಇದರಲ್ಲಿ ಉಕ್ತವಾಗಿರುವ ವಿಷಯಗಳು ಆಗಮ ಮತ್ತು ಪುರಾಣಗಳಾಗಿವೆ. ಅಲ್ಲಲ್ಲಿ ಪಾರಸೀ ಶಬ್ದಗಳ ಪ್ರಯೋಗ ಹಿತಮಿತವಾಗಿದೆ. ಸಂಸ್ಕೃತ ಪದಗಳು ಛಂದಸ್ಸಿಗೆ ಅನುನುಕೂಲವಾಗುವಂತೆ ಬಂದಿವೆ. ನೂತನ ಗಣಗಳ ಚರಿತ್ರೆಯನ್ನು ಬರೆದ ವೀರಶೈವ ಕವಿಗಳಲ್ಲಿ ಲಕ್ಕಣನೇ ಮೊದಲಿಗ. ಈತನ ನಂತರ ಬಂದ ಗುಬ್ಬಿಯ ಮಲ್ಲಣಾರ್ಯ, ಸಿದ್ಧನಂಜೇಶ ಮುಂತಾದವರು ಈತನ ಕೃತಿಗೆ ಋಣಿಯಾಗಿದ್ದಾರೆ.

 

Reviews

There are no reviews yet.

Be the first to review “ಲಕ್ಕಣ್ಣ ದಂಡೇಶ ಮತ್ತು ಶಿವತತ್ತ್ವ ಚಿಂತಾಮಣಿ / Lakkanna Dandesha Mattu Shivatatva Chintamani”

Your email address will not be published.

Related Books

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208