Chiranth Prakashana Online Book Store

Sale!

ಸಮಗ್ರ ಲಲಿತ ಪ್ರಬಂಧಗಳು / Samagra Lalita Prabandhagalu

297.00

Name of the Author – ಎ.ಎನ್. ಮೂರ್ತಿರಾವ್
Publisher – ಅಂಕಿತ ಪುಸ್ತಕ
Year of Publishing – 2021
Printing Number – 44
Cover Page – ಸಾದಾ
Pages – 372
Book Size – ⅛
ISBN – 81-87321-25-3

(For purchase of Rs 299/-and above)

About the Author

A n murthyrao ( ಎ.ಎನ್. ಮೂರ್ತಿರಾವ್ ...

ಎ ಎನ್ ಮೂರ್ತಿರಾವ್ :  ಪ್ರಬಂಧಕಾರ, ವಿಮರ್ಶಕ, ಪತ್ರಕಾರ, ಅನುವಾದಕಾರ ಎಂದು ಹಲವಾರು ಪಟ್ಟಿಗಳನ್ನು ಸಂತೋಷದಿಂದ ಹಚ್ಚಬಹುದಾದ ವ್ಯಕ್ತಿ ಶ್ರೀ ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾವ್, ೧೯೦೦ರ ಜೂನ್ ಹದಿನಾರರಂದು ಮಂಡ್ಯ ಜಿಲ್ಲೆಯ ಹೇಮಾವತಿ ತಡಿಯ ಒಂದು ಸುಸಂಸ್ಕೃತ ಗ್ರಾಮ ಅಕ್ಕಿಹೆಬ್ಬಾಳಿನಲ್ಲಿ ಹುಟ್ಟಿದ ಶ್ರೀಯುತರನ್ನು ಡಾ. ಪ್ರಭುಶಂಕರರು ”ಮಾನವ ಚೇತನ ವಿಕಾಸದ ಹಾದಿಯಲ್ಲಿ ಒಂದು ಮೈಲಿಗಲ್ಲು” ಎಂದು ಬಣ್ಣಿಸಿದ್ದಾರೆ.

ಮೂರ್ತಿರಾಯರು ಮಾಧ್ಯಮಿಕ ಶಾಲೆಯವರೆಗೆ ಅಕ್ಕಿಹೆಬ್ಬಾಳಿನಲ್ಲೇ ಅಧ್ಯಯನ ಮಾಡಿ, ಮೈಸೂರಿನ ವೆಸ್ಲಿಯನ್‌ ಮಿಷನ್‌ ಶಾಲೆಯಲ್ಲಿ ಪೌಢಶಾಲೆ ಮುಗಿಸಿ ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ. ಪದವಿಯನ್ನು ಪಡೆದರು. ಅನಂತರ ಮಹಾರಾಜಾ ಕಾಲೇಜಿನಲ್ಲಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ, ಹಲವಾರು ಸರಕಾರೀ ಇಂಟರ್ ಮೀಡಿಯೆಟ್ ಕಾಲೇಜುಗಳಲ್ಲಿ, ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು,  ಮಹಾರಾಜ ಕಾಲೇಜಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸೂತ್ರಧಾರಿಯಾಗಿದ್ದ ಶ್ರೀಯುತರು ತುಂಬ ದೊಡ್ಡ ಸಹೃದಯ ಸ್ನೇಹಿತವರ್ಗವನ್ನು ಕಟ್ಟಿಕೊಂಡವರು. ಕಾಲೇಜಿನ ಸೂಪರಿಂಟೆಂಡೆಂಟರಾಗಿ, ಆಕಾಶವಾಣಿಯ ಅಧಿಕಾರಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಹಲವಾರು ರಂಗಗಳ ಅನುಭವಗಳನ್ನು ಪಡೆದರು. ೧೯೮೪ರಲ್ಲಿ ಕೈವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಆಯ್ಕೆಯಾದ ಮೂರ್ತಿರಾಯರು ಕನ್ನಡ ಸಾಹಿತ್ಯ ಪ್ರೇಮಿಗಳ ಪ್ರೀತಿ-ಆದರಗಳಿಗೆ ಪಾತ್ರರಾದರು. ವಿದೇಶಗಳಲ್ಲೂ ಹಲವಾರು ಬಾರಿ ಪ್ರವಾಸ ಮಾಡಿ ಅಪಾರ ಲೋಕಾನುಭವಗಳನ್ನು ಪಡೆದರು. ಅವರ ‘ಚಿತ್ರಗಳು ಪತ್ರಗಳು’ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಪಾತ್ರವಾಗಿದೆ. ಮಾತೃ ಸಂಸ್ಥೆಯಾದ ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

Reviews

There are no reviews yet.

Be the first to review “ಸಮಗ್ರ ಲಲಿತ ಪ್ರಬಂಧಗಳು / Samagra Lalita Prabandhagalu”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208