Chiranth Prakashana Online Book Store

ಹಿಂದೂ : ಬದುಕಿನ ಸಮೃದ್ಧ ಅಡಕಲು / Hindu Badukina Samruddha Adakalu

390.00

Name of the Author – ಮೂಲ : ಭಾಲಚಂದ್ರ ನೇಮಾಡೆ, ಅನು : ಚಂದ್ರಕಾಂತ ಪೋಕಳೆ
Publisher – ನವಕರ್ನಾಟಕ ಪ್ರಕಾಶನ
Year of Publishing – 2016
Printing Number – 1
Cover Pages – ಉತ್ತಮ
Pages – 608
Book Size – ⅛ Demy Size
ISBN – 978-81-8467-654-9

Out of stock

Out of stock

Category:

(For purchase of Rs 299/-and above)

About the Author and Book

ಹೆಸರಾಂತ ಮರಾಠಿ ಲೇಖಕ ಬಾಲಚಂದ್ರ ನೆಮಾಡೆಯವರ ಕೃತಿಯೇ ‘ಹಿಂದೂ’ : ಬದುಕಿನ ಸಮೃದ್ಧ ಅಡಕಲು ‘. ಇದು ಅವರಿಗೆ ‘ಜ್ಞಾನಪೀಠ ಪ್ರಶಸ್ತಿ’ ತಂದುಕೊಟ್ಟ ಮಹತ್ವದ ಕೃತಿ.

ಪ್ರತಿಯೊಬ್ಬ ಮನುಷ್ಯನ ಬದುಕಿನ ಸಂಕೀರ್ಣತೆಗೆ ಕಾರಣವಾಗುವ ಸಾಧ್ಯತೆಗಳನ್ನು ಹೊಂದಿರುವ ವಾಂಶಿಕ ಸೂಕ್ಷ್ಮ ವಿವರಗಳನ್ನು ಹಲವು ತಲೆಮಾರುಗಳು ಬದುಕಿದ ರೀತಿಯ ಮೂಲಕ, ಅವುಗಳ ಮೇಲೆ ಪ್ರಭಾವ ಬೀರಿರಬಹುದಾದ ಬಾಹ್ಯ ಅಂಶಗಳು ಹಾಗೂ ಕಾಲಾನುಕ್ರಮದಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯತಕ್ಕಂತಹ ಸಾಮಾಜಿಕ, ಆರ್ಥಿಕ ‘ಸ್ಥಿತ್ಯಂತರಗಳ ಮೂಲಕ ಪರಿಶೋಧಿಸುವ ದಿಟ್ಟ ಪ್ರಯತ್ನವನ್ನು ನಡೆಸುವ ಮಹಾಕಾದಂಬರಿ ಶ್ರೀ ಭಾಲಚಂದ್ರ ನೆಮಾಡೆಯವರ “ಹಿಂದೂ”.

ಸಾಮಾನ್ಯ ತಿಳಿವಳಿಕೆಯಲ್ಲಿರುವ “ಹಿಂದೂ” ಪದದ ರೂಢಿಗತ ಅರ್ಥಕ್ಕೆ ಭಿನ್ನ ನೆಲೆಯಿಂದ ಐದು ಸಾವಿರ ವರ್ಷಗಳ ಪರಂಪರೆಯನ್ನು ಹೊಂದಿರುವಂತಹ ಅನನ್ಯ ಸಂಸ್ಕೃತಿಯೊಂದನ್ನು ವ್ಯಾಪಕ ಅರ್ಥದಲ್ಲಿ ಹಿಂದೂವೆಂದು ಗುರುತಿಸಿಕೊಂಡು ಅದರ ಕ್ರಮಾಗತ ಅವನತಿಗೆ ಕಾರಣವಾದ ಹಿನ್ನೆಲೆಯನ್ನು ಈ ಕಾದಂಬರಿ ಪ್ರಸ್ತುತಪಡಿಸುತ್ತದೆ. ಈ ಉತ್ಪನನದ ಪ್ರಕ್ರಿಯೆ ಆರ್ಯರ ಮೂಲಸ್ಥಾನವೆಂದು ಪರಿಗಣಿತವಾಗಿರುವ ಮೊಹೆಂಜದಾರೋದಲ್ಲಿ ಪ್ರಾರಂಭವಾಗಿ, ಕಾದಂಬರಿ ನಾಯಕ: ಪುರಾತತ್ವತಜ್ಞ, ಖಂಡೇರಾವ್‌ನ ಸ್ಮೃತಿಪಟಲದಲ್ಲಿ ಅವನ ತಂದೆಯ ಅವಸಾನ ಕಾಲದ ಕರೆಯಿಂದ ಅವನ ಸ್ವಂತ ಊರು ಮೋರಗಾಂವಿನ ಸುಮಾರು ಏಳು ತಲೆಮಾರುಗಳ ಇತಿಹಾಸ ಮರುಕಳಿಸುವುದರೊಂದಿಗೆ ಮುಂದುವರಿಯುತ್ತದೆ. ಕಾದಂಬರಿಯ ಮೂಲದ್ರವ್ಯ ಮೊಹಂಜದಾರೋವಿನಿಂದ ಮೋರಗಾಂವಿಗೆ ಹಿಂದಿರುಗುವ ಖಂಡೇರಾವ್‌ನ ಮರುಪ್ರಯಾಣದಲ್ಲಿ ಮೋರಗಾಂವಿನ ಮೂಲವಾಸಿಗಳ, ಅಲೆಮಾರಿಗಳ, ವಲಸಿಗರ ಹಾಗೂ ಇಲ್ಲಿಂದ ಗುಳೇ ಹೋದವರ ಸಮಗ್ರ ಬದುಕು, ಆದರ ಏಳು-ಬೀಳುಗಳು, ವಿಕಾಸ-ನಾಶಗಳು, ಬದಲಾವಣೆ ಪರಿವರ್ತನೆಗಳೊಂದಿಗೆ ಅನಾವರಣಗೊಳ್ಳುತ್ತಾ ಹೋಗುತ್ತದೆ….

ಇಲ್ಲಿ ಕಾದಂಬರಿಕಾರನಿಗೆ ವಸ್ತುಸ್ಥಿತಿಯನ್ನು ಅದರ ಎಲ್ಲಾ ಆಯಾಮಗಳೊಂದಿಗೆ- ಅದು ಜೀವವಿರೋಧಿಯಾಗಲೀ, ಜೀವಪರವಾಗಿರಲೀ ಅನಾವರಣಗೊಳಿಸುವ ಕರ್ತವ್ಯದೊಂದಿಗೆ ಭವಿಷ್ಯದ ಕುರಿತು ಆಶಾವಾದವನ್ನು ವ್ಯಕ್ತಪಡಿಸುವ ಜವಾಬ್ದಾರಿಯೂ ಸೇರಿಕೊಂಡಿರುವುದು ಇತ್ಯಾತ್ಮಕ ಅಂಶವಾಗಿದೆ…

“ಹಿಂದೂ” ಒಂದು ಸಾಹಿತ್ಯಕೃತಿ ಮಾತ್ರವಲ್ಲ ಮನುಷ್ಯನ ಬದುಕಿನ ವಾಸ್ತವಕ್ಕೆ ಬರೆದ ಭಾಷ್ಯವಾಗಿದೆ. ಬದುಕಿನ ಸಮೃದ್ಧತೆಗೆ ಮಾರಕವಾಗಿ ಪರಿಣಮಿಸಿದ ಅಂಶಗಳ ಕುರಿತು ಪ್ರತಿಯೊಬ್ಬರೂ ಗಮನಹರಿಸಲೇಬೇಕಾದ ಎಚ್ಚರಿಕೆಯ ಗಂಟೆಯಾಗಿದೆ. ಇಂತಹ ಒಂದು ಉತ್ಕೃಷ್ಟ ಕೃತಿ ಕನ್ನಡಕ್ಕೆ ಸಂದ ಅನುಪಮ ಕೊಡುಗೆಯಾಗಿದೆ……

  • ಡಾ.ಗೀತಾ ಶೆಣೈ

 

 

Reviews

There are no reviews yet.

Be the first to review “ಹಿಂದೂ : ಬದುಕಿನ ಸಮೃದ್ಧ ಅಡಕಲು / Hindu Badukina Samruddha Adakalu”

Your email address will not be published.

Related Books

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208